ದಕ್ಷಿಣದ ಕಡೆಗೆ ಹಾಯುವ ರಸ್ತೆ ಬದಿಯಲ್ಲಿ, ಉತ್ತರದಿಂದ ಹರಿಯುವ ನದಿತೀರದಲ್ಲಿ, ಹಚ್ಚ ಹಸುರಿನ ನಡುವೆ, ಪ್ರಶಾಂತ ವಾತಾವರಣದಲ್ಲಿ ಪ್ರಕೃತಿಯ ಸೊಬಗಿನಿಂದ ಎಲ್ಲರನ್ನೂ ಆಕರ್ಷಿಸುವ ಯೇಸುವಿನ ಪವಿತ್ರ ಹೃದಯದ ದೇವಾಲಯ ಶಂಭೂರು .
ಸರಿಸುಮಾರು 25 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ಬರಿಮಾರು ದೆವಾಲಯದ ಒಂದು ಭಾಗವಾಗಿತ್ತು. ಬರಿಮಾರು ದೇವಾಲಯದ ಶತಮಾನೋತ್ಸವದ ವರ್ಷವಾಗಿದ್ದ 1993 ರಂದು ಬಿಷಪ್ ರವರಲ್ಲಿ ಮನವಿ ಮಾಡಿದಲ್ಲಿ ಒಂದು ಚಾಪೆಲನ್ನು ಕಟ್ಟಲು ಸಾದ್ಯವಿದೆ ಎಂದು ಶಂಭೂರು ಭಾಗದ ಎರಡು ವಾಳೆಗಳಿಗೆ ವಂ.ಪೀಟರ್ ಫರ್ನಾಂಡೀಸ್ ಇವರು ಸೂಚಿಸಿದರು. ಹೊಸ ಹುರುಪಿನಿಂದ ಕೂಡಿದ ಶಂಭೂರಿನ ಸಮಸ್ತ ಭಕ್ತಾದಿಗಳು ಚಾಪೆಲ್ ಕಟ್ಟಲು ಸೂಕ್ತ ಜಾಗ ಹಾಗೂ ಯೋಜನೆಯನ್ನು ಸಿದ್ಧಪಡಿಸಿ ಬಿಷಪ್ ಭೆಟಿಯ ಸಂದರ್ಭದಲ್ಲಿ ಫಾ|| ಪೀಟರ್ ಫರ್ನಾಂಡೀಸ್ ಜೊತೆಗೂಡಿ ಮನವಿ ಸಲ್ಲಿಸಿದರು.
ಈ ಮನವಿ ಪರಿಗಣಿಸಿ ಅ ||ವಂ|| ಬಾಜಿಲ್ ಡಿಸೋಜ ರವರು ಸಮ್ಮತಿಸಿದರು.ಶ್ರೀ ಲೂವಿಸ್ ಕ್ರಾಸ್ತಾ ಹಾಗೂ ಶ್ರೀ ಅಂತೋನಿ ಮೊನಿಸ್ ಇವರು ಚಾಪೆಲ್ ಸ್ಥಾಪನೆಗೆ ಸ್ಥಳಾವಕಾಶವನ್ನು ದಾನವಾಗಿ ನೀಡಿದರು. ಪ್ರಾರಂಭದಲ್ಲಿ ಸಣ್ಣ ಗುಡಿಸಲಿನಂತೆ ಸ್ಥಾಪಿಸಿ ಅಲ್ಲಿ ಬಲಿಪೂಜೆಗಳನ್ನು ಏರ್ಪಡಿಸಿ ಹಂತ ಹಂತವಾಗಿ 1991 ರಲ್ಲಿ ಚಾಪೆಲ್ ಕಟ್ಟಡದ ಆರಂಭವಾಯಿತು. ಮುಂದಿನ ವರ್ಷ ಒಂದು ಕಟ್ಟಡ ಸಿದ್ಧಪಡಿಸಿ 1994 ರ ಫೆಬ್ರವರಿ 1 ರಂದು ಧರ್ಮಾಧ್ಯಕ್ಷರು ಚಾಪೆಲನ್ನು ಉದ್ಘಾಟಿಸಿದರು. ತದನಂತರ ಸುಸೂತ್ರವಾಗಿ ಧಾರ್ಮಿಕ ಕಾರ್ಯಗಳನ್ನು ಇಲ್ಲಿ ಪ್ರತಿ ಭಾನುವಾರ ನಡೆಸಲಾಯಿತು. ಕ್ರಮೇಣ 1996 ರ ಫೆಬ್ರವರಿ 6 ರಂದು ಚರ್ಚ್ ಕಟ್ಟಡವನ್ನು ಅನಾವರಣಗೊಳಿಸಲಾಯಿತು.
ಜನರು ಇನ್ನೂ ಧಾರ್ಮಿಕ ಭಾವದಿಂದ ಹುರುಪಾಗಿ ಮತ್ತೊಮ್ಮೆ ಧರ್ಮಾಧ್ಯಕ್ಷರಿಗೆ ಭಿನ್ನಹಿಸಿ ಧರ್ಮಗುರುಗಳ ನಿಯೋಜನೆಗೆ ಕೋರಿಕೊಂಡರು.ಒಪ್ಪಿದ ಧರ್ಮಾಧ್ಯಕ್ಷರು 1998 ರ ಮೇ 23 ರಂದು ವಂ||ಫಾ|| ಸ್ಟ್ಯಾನಿ ಲೋಬೊ ರನ್ನು ನಿಯೋಜಿಸಿ ಚಾಪೆಲನ್ನು ಚರ್ಚ್ ಎಂದು ಅಧಿಕೃತವಾಗಿ ಘೋಷಿಸಿದರು. ಅಂದಿನಿಂದ ಇದುವರೆಗೂ ಇಲ್ಲಿನ ಭಕ್ತಾದಿಗಳು ಎದೆಗುಂದದೆ ಸಾಮರಸ್ಯದಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸಿ ಈ ಕಗ್ಗಲ್ಲಿನಂತಿದ್ದ ಈ ಸ್ಥಳವನ್ನು ಸುಂದರ ತಾಣವನ್ನಾಗಿ ಮಾರ್ಪಡಿಸಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.
Church Cemetery
Grotto